ಯಶ್-ರಾಧಿಕಾ ಪಂಡಿತ್ ಜೋಡಿಯ ಮುಂದಿನ ಚಿತ್ರದ ಹೆಸರು ಮಾಂಜಾನಾ??

by - February 02, 2016


ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಳ್ಳಲಿರುವ ಹೊಸ ಸಿನಿಮಾಕ್ಕೆ 'ಗಾಂಧಿ ಕ್ಲಾಸ್' ಅಂತ ಹೆಸರಿಡಲಾಗಿದೆ ಎಂದು ಈ ಮೊದಲು ಸುದ್ದಿಯಾಗಿತ್ತು.

ಇದೀಗ ಚಿತ್ರ ತಂಡದಿಂದ ಹೊರ ಬಂದಿರುವ ಹೊಸ ವಿಚಾರ ಏನಪ್ಪಾ ಅಂದ್ರೆ, ಚಿತ್ರಕ್ಕೆ 'ಮಾಂಜಾ' ಎಂದು ಹೆಸರಿಡಲು ನಿರ್ಮಾಪಕ ಕೆ.ಮಂಜು ಅವರ ಸ್ನೇಹಿತರು ಒಬ್ಬರು ಸಲಹೆ ನೀಡಿದ್ದಾರಂತೆ. ಆದರೆ ಪಕ್ಕಾ ಅಂತ ಇನ್ನೂ ಚಿತ್ರದ ಹೆಸರು ನಿರ್ಧಾರವಾಗಿಲ್ಲ, ಆದರೆ ಎಲ್ಲರೂ ಟೈಟಲ್ ಬಗ್ಗೆ ಯಾಕಿಷ್ಟು ಉತ್ಸಾಹ ತೋರುತ್ತಾರೆ ಎಂಬುದು ನನಗೆ ಅಚ್ಚರಿಯ ವಿಷಯ ಎಂದು ನಿರ್ಮಾಪಕ ಮಂಜು ತಿಳಿಸಿದ್ದಾರೆ.

ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಹಂತದ ಕೆಲಸದಲ್ಲಿರುವ ಚಿತ್ರತಂಡ ಫೆಬ್ರವರಿ 25 ರಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ.

ಯಶ್ ಪಾತ್ರ

ಬಹಳ ಇನ್ನೋಸೆಂಟ್ ಪಾತ್ರದಲ್ಲಿ ಯಶ್ 'ಮಾಸ್ಟರ್ ಪೀಸ್' ಸಿನಿಮಾದಲ್ಲಿ ಬಿಲ್ಡಪ್ ರಾಜಾ, 'ರಾಜಾಹುಲಿ'ಯಲ್ಲಿ ಗೆಳೆಯರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುವ ಪಾತ್ರದಲ್ಲಿದ್ದ ಮಿಂಚಿದ್ದ ಯಶ್ ಅವರು ಈ ಸಿನಿಮಾದಲ್ಲಿ ಮಾತ್ರ ಬಹಳ ಮುಗ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

You May Also Like

0 comments