ಯಶ್-ರಾಧಿಕಾ ಪಂಡಿತ್ ಮದುವೆ ಡೇಟ್ ಫಿಕ್ಸ್ ಆಯ್ತು..!!
ಸ್ಯಾಂಡಲ್ ವುಡ್ ಯಶಸ್ವಿ ಜೋಡಿಗಳಲ್ಲಿ ಒಂದಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಒಂದಾಗುತ್ತಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ ನಲ್ಲಿ ಅವರ ಮದುವೆ ಫಿಕ್ಸ್ ಆಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅವರ ಮದುವೆ ಡಿಸೆಂಬರ್ 10 ಮತ್ತು 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದ ಯಶ್, ರಾಧಿಕಾ ಪಂಡಿತ್ ಬಳಿಕ ‘ಡ್ರಾಮಾ’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಹಾಗೂ ತೆರೆ ಕಾಣಲಿರುವ ‘ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.
ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ತಾರಾ ಜೋಡಿ ಶೀಘ್ರವೇ ಮದುವೆಯಾಗುವುದಾಗಿ ಹೇಳಿದ್ದರು, ಸದ್ಯ ಈ ಜೊಡಿ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರ ಬಿಡುಗಡೆಯ ನಂತರ ಮದುವೆ ತಯಾರಿ ಶುರುವಾಗಲಿದೆ ಎನ್ನಲಾಗಿದೆ.
0 comments