ನೋಡಿ ಎಬಿಡಿ ವಿಲಿಯರ್ಸ್ ನ ಆಕ್ರಮಣಕಾರಿ ಸ್ಫೋಟಕ ಬ್ಯಾಟಿಂಗ್ - ಎಬಿಡಿ ಹವಾ ಶುರು!!
ಅಬ್ರಾಹಂ ಡಿ ವಿಲಿಯರ್ಸ್ ಅಂದ್ರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ..ಮತ್ತ್ಯಾರು ಅನ್ಕೊಂಡ್ರಾ ಹಾ ಇವಾಗ ಗೊತ್ತಾಯ್ತಾ ಅದೇ ಭಾರತ (ಕರ್ನಾಟಕ) ದ ದತ್ತು ಪುತ್ರ ದಕ್ಷಿಣ ಆಫ್ರಿಕಾದ ಎಬಿಡಿ, ಮಿ.ಪರ್ಫೆಕ್ಟ್, ಮಿ.೩೬೦. ಇವರ ಆಟ ನೋಡೋದೆ ಕಣ್ಣಗೆ ಒಂದು ರೀತಿಯ ಹಬ್ಬ. ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಆವೃತ್ತಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿತ್ತು.ವಿರಾಟ್ ಕೋಹ್ಲಿ ಅಲಭ್ಯತೆಯಲ್ಲಿ ಹೈದಾರಾಬಾದ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಮುನ್ನಡೆಸುವ ಸಾಧ್ಯೆತೆಗಳಿದ್ದರೂ ಗಾಯದಿಂದಾಗಿ ಮೊದಲ ಪಂದ್ಯ ಕಳೆದುಕೊಂಡರು. ಇದರೊಂದಿಗೆ ಕೋಹ್ಲಿ ಜೊತೆಗೆ ವಿಲಿಯರ್ಸ್ ಸೇವೆಯಿಂದ ಆರ್‌ಸಿಬಿ ವಂಚಿತವಾಯ್ತು. ಈ ಹಿನ್ನಲೆಯಲ್ಲಿ ಕ್ರಿಸ್ ಗೇಲ್ ಹಾಗೂ ಉಸ್ತುವಾರಿ ನಾಯಕ ಶೇನ್ ವಾಟ್ಸನ್ ಮೇಲೆ ತಂಡ ಹೆಚ್ಚು ನೆಚ್ಚಿಕೊಂಡಿತು.ಕಳೆದ ವರ್ಷ ಆರ್‌ಸಿಬಿ ರನ್ನರ್ ಅಪ್ ಪ್ರಶಸ್ತಿ ಪಡೆಯುವಲ್ಲಿ ಎಬಿ ಡಿ ವಿಲಿಯರ್ಸ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅಲ್ಲದೆ ತಮ್ಮ 360 ಡಿಗ್ರಿ ಶಾಟ್‌ಗಳಿಂದಲೇ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದರು.
ಮೊದಲೆರಡು ಪಂದ್ಯಗಳಲ್ಲಿ ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ಸೊಬಗನ್ನು ಕಣ್ತುಂಬಿಕೊಳ್ಳುವ ಮಿಸ್ ಮಾಡಿಕೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣವನ್ನೇ ಇಂದು ಉಣಬಡಿಸಿದರು.ಇಂದೋರ್'ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಐಪಿಎಲ್ 10ನೇ ಆವೃತ್ತಿಯ 8ನೇ ಪಂದ್ಯದಲ್ಲಿ ವಿಲಿಯರ್ಸ್ ಕಣಕ್ಕಿಳಿದರು. ಆರಂಭಿಕ ಆಘಾತದಿಂದ ತತ್ತರಿಸಿ ಹೋಗಿದ್ದ ಆರ್‌ಸಿಬಿಗೆ ಎಬಿಡಿ (89) ಆಸರೆಯಾದರು. ಕೊನೆವರೆಗೂ ವಿಕೆಟ್ ಕಾಪಾಡಿಕೊಂಡ ದಕ್ಷಿಣ ಆಫ್ರಿಕಾದ ಪ್ರಚಂಡ ಬ್ಯಾಟ್ಸ್‌ಮನ್ ಕಿಂಗ್ಸ್ ಇಲೆವೆನ್ ವೇಗಿಗಳನ್ನು ಮನಬಂದಂತೆ ದಂಡಿಸಿದರು. ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ವಿಲಿಯರ್ಸ್ ಒಂದು ಹಂತದಲ್ಲಿ 28 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಆದರೆ ಎದುರಿಸಿದ ಕೊನೆ 18 ಎಸೆತಗಳಲ್ಲಿ 58 ರನ್ ಸಿಡಿಸಿ ಆರ್'ಸಿಬಿ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಅಂದಹಾಗೇ ಐಪಿಎಲ್'ನಲ್ಲಿ ಎಬಿಡಿಗಿದು 22ನೇ ಅರ್ಧಶತಕ.
0 comments