ದೊಡ್ಮನೆ ಹುಡುಗನ ಹೊಸ ಮನೆ ಹೇಗಿದೆ..?? ನೋಡೋಣ ಬನ್ನಿ!!

by - August 05, 2016



ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಮನೆ ಎಲ್ಲಿದೆ.? ಈ ಪ್ರಶ್ನೆ ಕೇಳಿದ ಕೂಡಲೆ ಎಲ್ಲರೂ ಬೆಟ್ಟು ಮಾಡಿ ತೋರಿಸುವುದು ಸದಾಶಿವನಗರದತ್ತ.!ಅಣ್ಣಾವ್ರ ಕಾಲದಿಂದಲೂ ಅಪ್ಪು ವಾಸವಾಗಿರುವುದು ಇದೇ ಸದಾಶಿವನಗರದಲ್ಲಿ.
ಡಾ.ರಾಜ್ ಕುಮಾರ್ ರವರ ಮನೆ ಅಂದ್ರೆ ಸದಾಶಿವನಗರದಲ್ಲಿ ಲ್ಯಾಂಡ್ ಮಾರ್ಕ್ ಇದ್ಹಾಗೆ. ಹೀಗಾಗಿ, ಪವರ್ ಸ್ಟಾರ್ ರನ್ನ ಭೇಟಿ ಮಾಡಲು, ಅವರ ಮನೆ ಮುಂದೆ ಅಭಿಮಾನಿಗಳ ದಂಡು ಪ್ರತಿದಿನ ಇದ್ದೇ ಇರುತ್ತೆ.
ಬಿಡುವಿಲ್ಲದ ಶೂಟಿಂಗ್ ನಡುವೆಯೂ ಕುಟುಂಬ ಸದಸ್ಯರ ಜೊತೆ ಜೀವನ ಕಳೆಯಲು ಬಯಸಿರುವ ಪುನೀತ್ ರಾಜ್ ಕುಮಾರ್ ಹೊಸ ಮನೆ ಮಾಡಿದ್ದಾರೆ. ಪುನೀತ್ ರವರ ಎರಡನೇ ಮನೆಯ ಒಳಾಂಗಣ ವಿನ್ಯಾಸ ನೋಡಿದ್ರೆ, ನೀವು ಬಾಯಿ ಮೇಲೆ ಬೆರಳಿಡುತ್ತೀರಾ..ಅಂದಹಾಗೆ ಇದು ಭಾರತದ ಪ್ರಮುಖ ಪೀಠೋಪಕರಣ ಮತ್ತು ಒಳಾಂಗಣ ಅಲಂಕರಣದ ಬ್ರ್ಯಾಂಡ್ ಆಗಿರುವ ಗೋದ್ರೆಜ್ ಇಂಟೀರಿಯೋ, 'ಅಪ್ ಲೋಡ್ ಅಂಡ್ ಟ್ರಾನ್ಸ್ ಫಾರ್ಮ್' ಅಭಿಯಾನದ ಅಂಗವಾಗಿ ಪುನೀತ್ ರಾಜ್ ಕುಮಾರ್ ರವರ ಎರಡನೇ ಮನೆಗೆ ಹೊಸ ರೂಪ ನೀಡಿದೆ. ಪುನೀತ್ ರಾಜ್ ಕುಮಾರ್ ರವರ ಜೀವನ ಶೈಲಿ, ಅಗತ್ಯಕ್ಕೆ ತಕ್ಕಂತೆ, ಅವರ ಮನೆಗೆ ಗೋದ್ರೆಜ್ ಇಂಟೀರಿಯೋ ಆಕರ್ಷಕ ರೂಪ ನೀಡಿದೆ.ಎಷ್ಟು ಬೇಕೋ ಅಷ್ಟು ಬೆಳಕು, ಅದಕ್ಕೆ ತಕ್ಕಂತೆ ವಾಲ್ ಪೇಂಟ್ ಮತ್ತು ಪೀಠೋಪಕರಣ ಇರುವ ಪುನೀತ್ ರಾಜ್ ಕುಮಾರ್ ರವರ ಹೊಸ ಮನೆಯ ಲಿವಿಂಗ್ ಏರಿಯಾ ನೋಡಲು ಚೆಂದ.
ಅಂದಹಾಗೆ ,

ಅಪ್ಪುರವರಿಗೆ ಇನ್ನೊಂದು ಮನೆ ಏಕೆ ??

" ಬಿಡುವಿಲ್ಲದ ಶೂಟಿಂಗ್ ನಡುವೆಯೂ ಕುಟುಂಬ ಸದಸ್ಯರ ಜೊತೆಗೆ ಖುಷಿಯ ಜೀವನ ಕಳೆಯಲು ನಾನು ಹೊಸ ಮನೆ ಮಾಡಿದೆ. ನನ್ನ ಮನೆಗೆ ಒಳಾಂಗಣ ವಿನ್ಯಾಸ ಮಾಡಲು ಗೋದ್ರೆಜ್ ಇಂಟೀರಿಯೋ 'ಅಪ್ ಲೋಡ್ ಅಂಡ್ ಟ್ರಾನ್ಸ್ ಫಾರ್ಮ್' ಅಭಿಯಾನದ ಮುಖಾಂತರ ಮುಂದಾದರು. ನನಗೆ ಬೇಕಾದ ಹಾಗೆ ಉತ್ತಮ ವಿನ್ಯಾಸ ಮಾಡಿದ್ದಾರೆ. ನನ್ನ ಕನಸಿನ ಮನೆ ನಿಜವಾಗಿದೆ'' ಎಂದರು ಪುನೀತ್ ರಾಜ್ ಕುಮಾರ್.


                           





















You May Also Like

0 comments