ಯಶ್ ರಾಧಿಕಾ ಪಂಡಿತ್ ಅದ್ದೂರಿ ನಿಶ್ಚಿತಾರ್ಥದ ಚಿತ್ರ & ವಿಡಿಯೋಗಳು

by - August 14, 2016



ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಗೋವಾದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಡಲ ತಡಿಯ ಸುಂದರ ತಾಣ ಗೋವಾದ ಆಗುಂದಾ ಸಮೀಪವಿರುವ ‘ತಾಜ್ ವಿವಾಂತಾ ಹಾಲಿಡೇ ವಿಲೇಜ್ ಹೋಟೆಲ್’ನಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಮಂದಿ ಬಂದು, ಶುಭ ಹಾರೈಸಿದರು. ರಾಧಿಕಾ ಪಂಡಿತ್ ಅವರ ತಾಯಿ ಮಂಗಳಾ ಅವರ ತವರೂರು ಗೋವಾ ಆಗಿದ್ದು, ಅದಕ್ಕಾಗಿ ಇಲ್ಲಿಯೇ ನಿಶ್ಚಿತಾರ್ಥ ಇಟ್ಟುಕೊಳ್ಳಲಾಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾದವು. ಯಶ್ ಕಡುನೀಲಿ ಬಣ್ಣದ ಶೇರ್ವಾನಿ ಹಾಗೂ ರಾಧಿಕಾ ನೀಲಿ ವರ್ಣದ ಗೌನ್‌ನಲ್ಲಿ ಮಿಂಚುತ್ತಿದ್ದರು. ಯಶ್ ಅವರು ರಾಧಿಕಾಗೆ ವಜ್ರದ ಉಂಗುರ ತೊಡಿಸಿದರು. ಬಳಿಕ ಇಬ್ಬರೂ ಹಾರ ಬದಲಾಯಿಸಿಕೊಂಡರು. ಯಶ್-ರಾಧಿಕಾ ಆಪ್ತರು, ಕುಟುಂಬದ ಎಲ್ಲ ಸದಸ್ಯರು ಹಾಗೂ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ– ತಂತ್ರಜ್ಞರು ಉಪಸ್ಥಿತರಿದ್ದರು.
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದಿರುವ ಗಣ್ಯರಿಗೆಂದು ಎಂಟು ಬಗೆಯ ಸಿಹಿ ತಿಂಡಿ ಸೇರಿದಂತೆ ಸುಮಾರು ಮೂವತ್ತು ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಕರ್ನಾಟಕ ಮತ್ತು ಆಂಧ್ರದ ಶೈಲಿಯಲ್ಲಿ ಭೋಜನ ತಯಾರಾಗಿತ್ತು.
ರವಿಚಂದ್ರನ್ ದಂಪತಿ, ಅಂಬರೀಶ್– ಸುಮಲತಾ, ಪುನೀತ್ ರಾಜಕುಮಾರ್, ಕಲಾವಿದರಾದ ಅರುಣ್ ಸಾಗರ್, ಮಾಳವಿಕಾ, ನಿರ್ದೇಶಕರಾದ ಯೋಗರಾಜ್ ಭಟ್, ಸಾಧು ಕೋಕಿಲಾ, ಹರ್ಷ, ಶಶಾಂಕ್, ಪ್ರೀತಮ್ ಗುಬ್ಬಿ, ನಿರ್ಮಾಪಕ ಕೆ.ಮಂಜು ಸೇರಿದಂತೆ ಹಲವು ಕಲಾವಿದರು– ತಂತ್ರಜ್ಞರು ಸಂಭ್ರಮದಲ್ಲಿ ಪಾಲ್ಗೊಂಡು ನವ ಜೋಡಿ ಶುಭಾಶಯ ಕೋರಿದರು.
‘ನಂದಗೋಕುಲ’ ಧಾರಾವಾಹಿ ಮೂಲಕ ಯಶ್ ಹಾಗೂ ರಾಧಿಕಾ ಪಂಡಿತ್ ಪರಿಚಯ ಬೆಳೆದಿತ್ತು. ಆ ನಂತರ ‘ಮೊಗ್ಗಿನ ಮನಸು’ ಚಿತ್ರದಲ್ಲಿ ಈ ಜೋಡಿ ಅಭಿನಯಿಸಿತ್ತು. ಬಳಿಕ ತೆರೆ ಕಂಡ ‘ಡ್ರಾಮಾ’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸಿನಿಮಾಗಳು ಹಿಟ್ ಆಗಿದ್ದವು.
ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ‘ಕ್ಯೂಟ್ ಕಪಲ್’, ಈ ಬಗ್ಗೆ ಗಾಸಿಪ್ ಕೇಳಿಬಂದಾಗಲೆಲ್ಲ ಜಾಣತನದಿಂದ ಪ್ರತಿಕ್ರಿಯೆ ನೀಡುತ್ತಿದ್ದರು. ಈಗ ನಿಶ್ಚಿತಾರ್ಥದೊಂದಿಗೆ ಎಲ್ಲ ವದಂತಿಗೆ ತೆರೆ ಬಿದ್ದಂತಾಗಿದೆ.
ಮೂರ್ನಾಲ್ಕು ದಿನಗಳ ಬಳಿಕ ಬೆಂಗಳೂರಿಗೆ ಬರಲಿರುವ ಯಶ್– ರಾಧಿಕಾ, ತಮ್ಮ ನಿಶ್ಚಿತಾರ್ಥ ಹಾಗೂ ಮದುವೆ ಕುರಿತು ಮಾಧ್ಯಮಗಳಿಗೆ ವಿವರ ನೀಡಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಲ್ಲಿದೆ ಎಕ್ಸ್ಕ್ಲೂಸಿವ್ ಚಿತ್ರಗಳು ನಿಮಗಾಗಿ :




























ಇನ್ನು ಸಾಕಾಗಿಲ್ಲ ??


ಇಲ್ಲಿದೆ ನಿಶ್ಚಿತಾರ್ಥದ ತುಣುಕುಗಳು  :

VIDEO 1


VIDEO 2


VIDEO 3

You May Also Like

0 comments