ಯಶ್-ರಾಧಿಕಾ ನಿಶ್ಚಿತಾರ್ಥದ ಏಕ್ಸಕ್ಲೂಸಿವ್ HD ಚಿತ್ರಗಳು..!!
ನಟ ಯಶ್ ಹಾಗೂ ರಾಧಿಕಾ ನಿಶ್ಚಿತಾರ್ಥ ಇತ್ತೀಚೆ ಗೋವಾದಲ್ಲಿ ನಡೆದಿದ್ದು ತಮ್ಮಿಬ್ಬರ 5 ವರ್ಷಗಳ ಪ್ರೀತಿಯ ಬಗೆಗಿನ ಗುಟ್ಟು ರಟ್ಟು ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜೋಡಿ, ತಮ್ಮ 5 ವರ್ಷಗಳ ಪ್ರೇಮ್ ಕಹಾನಿಯನ್ನು ಬಿಚ್ಚಿಟ್ಟಿತ್ತು. ರಾಧಿಕಾಗೆ ನಾನೇ ಫೋನ್ ಮಾಡಿ ಪ್ರಪೋಸ್ ಮಾಡಿದೆ ಎಂದು ನಟ ಯಶ್ ತಮ್ಮ ಪ್ರೀತಿಯ ಆರಂಭದ ದಿನಗಳನ್ನು ತೆರೆದಿಟ್ಟಿದ್ದಾರೆ.
ನಾನು ಅಂದು ಫೋನ್ ಮಾಡಿ ಪ್ರಪೋಸ್ ಮಾಡಿದ ರೀತಿ ರಾಧಿಕಾಗೆ ಇಷ್ಟವಾಗಿರಲಿಲ್ಲ, ನೀರಸವಾಗಿ ಪ್ರೇಮ ನಿವೇದನೆ ಮಾಡಿದೆ ಎಂಬ ಆರೋಪವನ್ನು ನಿವಾರಿಸಲು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಪ್ರಪೋಸ್ ಮಾಡುವ ದೃಶ್ಯವನ್ನು ಸೃಷ್ಟಿಸಲಾಗಿತ್ತು ಎಂದು ಹೇಳಿದ್ದಾರೆ.
ಯಶ್ ಪ್ರಪೋಸ್ ಮಾಡಿದಾಗ ನಾನು ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. ಯೋಚನೆ ಮಾಡಿ ನಿಧಾನಕ್ಕೆ ಒಪ್ಪಿಕೊಂಡೆ ಎಂದು ರಾಧಿಕಾ ಹೇಳಿದ್ದಾರೆ. ನಮ್ಮಿಬ್ಬರ ಪ್ರೀತಿಗೆ ಇಬ್ಬರ ಮನೆಯಲ್ಲೂ ಯಾವ ವಿರೋಧವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲೇ ಸಂಪ್ರದಾಯ ಬದ್ದವಾಗಿ ವಿವಾಹವಾಗುವುದಾಗಿ ಈ ಜೋಡಿ ತಿಳಿಸಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ವಿವಾಹದ ದಿನಾಂಕ ನಿಗದಿ ಪಡಿಸುವುದಾಗಿ ನಟ ಯಶ್ ಹಾಗೂ ರಾಧಿಕಾ ತಿಳಿಸಿದ್ದಾರೆ.
Source : Page3cinema
0 comments