ನಮಗೆ ಕಲೆಗಿಂತ ದೇಶ ದೊಡ್ಡದು : ಪುನೀತ್ ರಾಜಕುಮಾರ್

by - October 17, 2016


ಭಾರತದಲ್ಲಿ ಪಾಕಿಸ್ತಾನದ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಪ್ರಸ್ತಾಪಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ.

 ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವರ್ ಸ್ಟಾರ್,
"ನಮಗೆ ಕಲೆಗಿಂತ ದೇಶ ದೊಡ್ಡದು. ನಾವೆಲ್ಲಾ ಮೊದಲು ಭಾರತೀಯರು ನಂತರ ಕಲಾವಿದರು. ದೇಶಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ನಮ್ಮ ಸಹಮತವಿದೆ.ಕಾವೇರಿ ಮಾತ್ರವಲ್ಲ, ಉತ್ತರ  ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಿದ್ದೇವೆ.ಉತ್ತರ ಕರ್ನಾಟಕದ ಬಗ್ಗೆ ಚಿತ್ರರಂಗ ನಿರ್ಲಕ್ಷ್ಯತನ ಮಾಡಿಲ್ಲ. ಕನ್ನಡಿಗರೆಲ್ಲಾ ಒಂದೇ, ನಾವೆಲ್ಲಾ ಒಂದೇ ತಾಯಿ ಮಕ್ಕಳು." ಎಂದು ನಟ ಪುನೀತ್​ ರಾಜ್​ಕುಮಾರ್​ ಹೇಳಿಕೆ ನೀಡಿದ್ದಾರೆ.

You May Also Like

0 comments