ವಿಶೇಷ : ಸಂತು ಸ್ಟ್ರೈಟ್ ಫಾರ್ವರ್ಡ್ ಸಾಂಗ್ ಮೇಕಿಂಗ್ | ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್

by - September 26, 2016


ಗೋವಾದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ವಿಮಾನ ಏರಿದ್ದ ಯಶ್‌ ಮತ್ತು ರಾಧಿಕಾ ಪಂಡಿತ್‌ ಜೋಡಿಯು, ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ಭಾವಹಿಸಿತ್ತು. ಅಲ್ಲಿಂದ ನಾರ್ವೆಗೆ ಪ್ರಯಾಣ ಮುಂದುವರೆಸಿತ್ತು.

ಸಿನಿಮಾದ ಶೂಟಿಂಗ್‌ ಯುರೋಪ್‌ನಲ್ಲಿ ನಡೆದಿದ್ದು, ನಾರ್ವೆ ಸೇರಿದಂತೆ ಹತ್ತು ಹಲವು ಲೊಕೇಶನ್‌ನಲ್ಲಿ ಶೂಟಿಂಗ್‌ ಮಾಡುತ್ತಿದ್ದಾರೆ ನಿರ್ದೇಶಕರು. ಮಹತ್ವದ ಕೆಲವು ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣ ಅಲ್ಲಿ ನಡೆಯುತ್ತಿರುವುದು ವಿಶೇಷ. ಅಲ್ಲದೇ ಸತತ ಹದಿನೈದಕ್ಕೂ ಹೆಚ್ಚು ದಿನಗಳ ಕಾಲ ಯುರೋಪ್‌ನಲ್ಲಿ ಚಿತ್ರೀಕರಣದ ನಡೆದದ್ದು, ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ವಾಪಸ್ಸಾಗಿದ್ದಾರೆ.

ಸಿನಿಮಾದ ಶೂಟಿಂಗ್‌ ಮುಗಿಯುವ ತನಕ ಯಾವುದೇ ಫೋಟೋ ಬಹಿರಂಗ ಪಡಿಸದಂತೆ ಮುತುವರ್ಜಿ ವಹಿಸಿತ್ತು ಸಂತು ಸಿನಿಮಾ ತಂಡ. ಆದರೂ ಸಹ  ಸಾಂಗ್ ನ ಮೇಕಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿದೆ.

ಸಂತು ಸ್ಟ್ರೈಟ್ ಫಾರ್ವರ್ಡ್ ನ ಮೊದಲ ಸಾಂಗ್ ಮೇಕಿಂಗ್ : 



You May Also Like

0 comments