ಕೆ ಜಿ ಎಫ್ ಡೈಲಾಗ್ ಸೂಪರ್ ಗುರು !!

by - September 17, 2017





ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್' ಚಿತ್ರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಸ್ಯಾಂಡಲ್ ವುಡ್ ನ ದೊಡ್ಡ ಬಜೆಟ್ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ 'ಕೆ.ಜಿ.ಎಫ್' ಯಶ್ ಅವರ ವೃತ್ತಿ ಜೀವನದಲ್ಲೂ ಮೈಲಿಗಲ್ಲು. ಈ ಚಿತ್ರಕ್ಕಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಸ್ಕ್ರಿಪ್ಟ್ ಗೆ ತಕ್ಕಂತೆ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಈಗಾಗಲೇ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ಅವರ ಫಸ್ಟ್ & ಸೆಕೆಂಡ್ ಲುಕ್ ರಿಲೀಸ್ ಆಗಿದ್ದು ಕುತೂಹಲ ಹೆಚ್ಚಿಸಿದೆ. ರಾಕಿಂಗ್ ಫ್ಯಾನ್ಸ್ ಕಾತುರರಾಗಿದ್ದಾರೆ.

ಇತ್ತೀಚಿಗಷ್ಟೆ ಯಶ್ ಮತ್ತು ರಾಧಿಕ ಪಂಡಿತ್ '55ನೇ ಬೆಂಗಳೂರು ಗಣೇಶ ಉತ್ಸವ' ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಆ ಉತ್ಸವದಲ್ಲಿ ಯಶ್, ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ ಹುಬ್ಬೇರಿಸಿದರು. ಈ ಮೂಲಕ ನಟ ಯಶ್, ತಾನು ನಟನೆ ಮಾತ್ರವಲ್ಲ, ನೃತ್ಯದಲ್ಲೂ ರಾಕಿಂಗ್ ಅಂತಾ ಮತ್ತೆ ಸಾಬೀತುಪಡಿಸಿದರು. ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ಡಾನ್ಸ್ ಮಾಡಿದ ನಂತರ 
ಅಭಿಮಾನಿಗಳ ಪ್ರಶ್ನೆಗಳಿಗೆ ಯಶ್ ರವರು ಉತ್ತರಿಸಿದರು. ಈ ವೇಳೆ ಕೆ ಜಿ ಎಫ್ ಚಿತ್ರದ ಡೈಲಾಗ್ ಬೇಕು ಎಂದು ಅಭಿಮಾನಿಗಳು ಕೋರಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಯಶ್ ರವರು ಕೆ ಜಿ ಎಫ್ ಚಿತ್ರದ ಒಂದು ಡೈಲಾಗ್ ನ್ನ ರಿವಿಲ್ ಮಾಡಿದರು. ರಿವಿಲ್ ಮಾಡಿರುವ ಆ ಡೈಲಾಗಾದ್ರೂ ಏನು ??ಇಲ್ಲಿದೆ ನೋಡಿ : 



You May Also Like

0 comments