ಅರ್ಜುನ್ ರೆಡ್ಡಿ ಚಿತ್ರ ರಿಮೇಕ್ ಮಾಡುವುದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು ??

by - September 15, 2017




ಇತ್ತೀಚೆಗೆ ತೆರೆಕಂಡು ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ 'ಅರ್ಜುನ್ ರೆಡ್ಡಿ'. ಇದೀಗ ಈ ಸಿನಿಮಾವನ್ನು ಕನ್ನಡಕ್ಕೆ ರೀಮೇಕ್ ಮಾಡುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಈ ಚಿತ್ರದ ರೀಮೇಕ್ ಹಕ್ಕುಗಳನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖರೀದಿಸಿರುವ ಬಗ್ಗೆ ಮಾಹಿತಿ ಇದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಪೋಷಿಸಿದ್ದ ಪಾತ್ರಕ್ಕೆ  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ  

ರಾಕಿಂಗ್ ಸ್ಟಾರ್ ಯಶ್ ಗೆ ತಮ್ಮದೇ ಆದ ಇಮೇಜ್ ಇದೆ. ಡಿಫ್ರೆಂಟ್ ಸ್ಟೈಲ್, ಮ್ಯಾನರಿಸಂ, ಡೈಲಾಗ್ ನಿಂದ ಎಲ್ಲ ರೀತಿಯ ಪಾತ್ರಗಳಿಗೂ, ಎಲ್ಲ ರೀತಿಯ ಚಿತ್ರಗಳಿಗೂ ಹೊಂದಿಕೊಳ್ಳುವ ನಟ. ಇಂತಹ ನಟ ಈ ಚಿತ್ರವನ್ನ ಮಾಡಿದರೇ ಸ್ಯಾಂಡಲ್ ವುಡ್ ನಲ್ಲಿ ಅವರ ಇಮೇಜ್ ಕಂಪ್ಲೀಟ್ ಬದಲಾಗುತ್ತಂತೆ. ಅದಕ್ಕಾಗಿ ವಿಜಯ ದೇವರಕೊಂಡ ಅವರ ಪಾತ್ರಕ್ಕೆ ಯಶ್ ಅವರೇ ಸೂಕ್ತ ಎನ್ನುತ್ತಿದ್ದಾರೆ ಸ್ಯಾಂಡಲ್ ವುಡ್ ನ ಕೆಲವು ಸಿನಿಮಾ ಮೇಕರ್ ಗಳು. ಈ ಗಾಳಿ ಸುದ್ದಿ ಯಶ್ ಅವರ ಕಿವಿಗೆ ಮುಟ್ಟಿದ್ದು ಅವರು ಹೀಗೆ ಪ್ರತಿಕ್ರಿಯಸಿದ್ದಾರೆ : 


ಸದ್ಯ ನಾನು ಕೆ ಜಿ ಎಫ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದೇನೆ. ಈ ಚಿತ್ರ ಮುಗಿಯುವವರೆಗೂ ಮುಂದಿನ ಚಿತ್ರದ ಬಗ್ಗೆ ನಾನು ಏನನ್ನು ಹೇಳಲಾರೆ. ಚಿತ್ರೀಕರಣ ಮುಗಿದಮೇಲೆ, ನಾನೇ ನನ್ನ ಮುಂದಿನ ಚಿತ್ರದ ಬಗ್ಗೆ ಹೇಳುತ್ತೇನೆ

ಎಂದು ಖಡಕ್ ಆಗಿ ಅವರ ಅಭಿಪ್ರಾಯವನ್ನ ತಿಳಿಸಿದ್ದಾರೆ. 

ಅರ್ಜುನ್ ರೆಡ್ಡಿ' ಸಿನಿಮಾ ರೊಮ್ಯಾಂಟಿಕ್ ಹಾಗೂ ಬೋಲ್ಡ್ ಸಿನಿಮಾ. ನಾಯಕ ಮತ್ತು ನಾಯಕಿಯ ಮಧ್ಯೆ ಅತಿಯಾದ ಹಸಿಬಿಸಿ ದೃಶ್ಯಗಳಿಂದ ಕೂಡಿದೆ. ಅದಕ್ಕಾಗಿ, ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿದೆ. ಹೀಗಾಗಿ, ಇಂತಹ ಸಿನಿಮಾವನ್ನ ಕನ್ನಡದಲ್ಲಿ ಹೇಗೆ ಮಾಡ್ತಾರೆ ಎಂಬುದು ಈಗ ಕುತೂಹಲ.

You May Also Like

0 comments