ಯಶ್ ಅಭಿಮಾನಿಗಳು ಇದನ್ನ ನೋಡಲೇ ಬೇಕು!!

by - June 26, 2018


ರಾಕಿಂಗ್ ಸ್ಟಾರ್ ಯಶ್. ಸದ್ಯ 'ಕೆಜಿಎಫ್' ಸಿನಿಮಾದಲ್ಲಿ ಬ್ಯುಸಿ ಆಗಿರುವ ನಾಯಕ ನಟ. ಹುಟ್ಟುಹಬ್ಬದ ನಂತರ ಅಭಿಮಾನಿಗಳಿಗೆ ಯಶ್ ಅವರನ್ನು ಭೇಟಿ ಮಾಡುವ ಸಂದರ್ಭವೇ ಸಿಗಲಿಲ್ಲ. ಇನ್ನು ಆನ್ ಸ್ಕ್ರೀನ್ ಮೇಲೆ ನೋಡಿ ಕಣ್ಣು ತುಂಬಿಕೊಳ್ಳೋಣ ಅಂತ ಪ್ಲಾನ್ ಮಾಡಿದವರಿಗೆ ನಿರಾಸೆ ಆಗಿತ್ತು. ಆದರೆ ಯಶ್ ತಮ್ಮ ಅಭಿಮಾನಿಗಳಿಗೆ ರಾತ್ರೋರಾತ್ರಿ ಸರ್ಪ್ರೈಸ್ ಕೊಟ್ಟಿದ್ದಾರೆ. ರಾತ್ರಿ ವೇಳೆ ಬೆಂಗಳೂರಿನ ರಸ್ತೆಯಲ್ಲಿದ್ದ ಅಭಿಮಾನಿಗಳ ಮುಂದೆ ರಾಕಿಂಗ್ ಸ್ಟಾರ್ ಪ್ರತ್ಯಕ್ಷವಾಗಿದ್ದಾರೆ. ಹೌದು ಯಶ್ ರಾತ್ರೋರಾತ್ರಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಸೈಕಲ್ ಹತ್ತಿ ರೌಂಡ್ಸ್ ಹೊಡೆದಿದ್ದಾರೆ.
ಯಶ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್ ತುಳಿಯುತ್ತಾ ತಮ್ಮ ಪಾಡಿಗೆ ಹೊರಟಿದ್ದಾರೆ. 



 

ಯಾರಿದು ಮುಸುಕುದಾರಿ ಎಂದು ಹಿಂದೆ ಬಿದ್ದ ಅಭಿಮಾನಿಗಳಿಗೆ ಯಶ್ ಎನ್ನುವುದು ತಿಳಿದು ಬಂದಿದೆ. ನಂತರ ಅಭಿಮಾನಿಗಳು ಯಶ್ ಸೈಕಲ್ ಸವಾರಿ ಮಾಡುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಯಶ್ ಸೈಕಲ್ ತುಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಇದೇ ರೀತಿ ಬೆಳ್ಳಂಬೆಳಗ್ಗೆ ಸೈಕಲ್ ಹತ್ತಿ ನಂದಿಬೆಟ್ಟಕ್ಕೆ ರೈಡ್ ಹೊರಟಿದ್ದರು. ಅದರಂತೆ ಯಶ್ ಕೂಡ ಸೈಕಲ್ ನಲ್ಲಿ ನೈಟ್ ರೈಡ್ ಮಾಡಿದ್ದಾರೆ.

 

You May Also Like

0 comments