­

ದಿ ವಿಲನ್ ಟೀಸರ್ ಗೂ ಮುನ್ನ ಒಂದು ಪ್ರಿ-ಟೀಸರ್ ರಿಲೀಸ್ ಆಗಿದೆ!!! ಇಲ್ಲಿದೆ ನೋಡಿ..!!

by - June 27, 2018




ಶಿವರಾಜಕುಮಾರ್‌ ಹಾಗೂ ಸುದೀಪ್‌ ಅಭಿಮಾನಿಗಳು, ನಿರ್ದೇಶಕ ಪ್ರೇಮ್‌ ಅವರಲ್ಲಿ ಅದೆಷ್ಟು ಬಾರಿ "ಟೀಸರ್‌ ಬಿಡುಗಡೆ ಯಾವಾಗ' ಎಂದು ಕೇಳಿದ್ದರೋ ಲೆಕ್ಕವಿಲ್ಲ. ಆದರೆ, ಪ್ರೇಮ್‌ "ವೆರಿ ಸೂನ್‌ ಬಾಸ್‌' ಎನ್ನುತ್ತಲೇ ತಮ್ಮ ಕೆಲಸದಲ್ಲಿ ಬಿಝಿಯಾಗಿದ್ದರು. ಅಂತಿಮವಾಗಿ ಈಗ ಟೀಸರ್‌ ಬಿಡುಗಡೆಯ ದಿನಾಂಕವನ್ನು ಪ್ರೇಮ್‌ ಘೋಷಿಸಿದ್ದು, ಜುಲೈ 28 ರಂದು ಅಂದರೆ ನಾಳೆ "ದಿ ವಿಲನ್‌' ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.
ಅದಕ್ಕೂ ಮುನ್ನ ಒಂದು ಪ್ರಿ-ಟೀಸರ್ ರಿಲೀಸ್ ಆಗಿದೆ.
ನಗರದ ಜಿಟಿ ವರ್ಲ್ಡ್ ಮಾಲ್‌ನಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಲಿದ್ದು, ತಮ್ಮ ನೆಚ್ಚಿನ ನಟರ ಗೆಟಪ್‌ ನೋಡಲು ಅಭಿಮಾನಿಗಳು ಕಾತುರರಾಗಿರುವುದಂತೂ ಸುಳ್ಳಲ್ಲ. "ದಿ ವಿಲನ್‌' ಚಿತ್ರದ ಟೀಸರ್‌ ಬಿಡುಗಡೆಗೆ ಚಿತ್ರತಂಡ 500 ರೂಪಾಯಿ ಟಿಕೆಟ್‌ ದರ ನಿಗದಿ ಮಾಡಿದೆ. ನೀವು 500 ರೂಪಾಯಿ ಟಿಕೆಟ್‌ ಪಡೆದು ಟೀಸರ್‌ ವೀಕ್ಷಿಸಬಹುದು. ಎಲ್ಲಾ ಓಕೆ ಟೀಸರ್‌ ಬಿಡುಗಡೆಗೆ ಟಿಕೆಟ್‌ ಯಾಕೆ?


ಅದು ಕೂಡಾ 500 ರೂಪಾಯಿ ಎಂದು ನೀವು ಹುಬ್ಬೇರಿಸಬಹುದು. "ದಿ ವಿಲನ್‌' ತಂಡ ಟೀಸರ್‌ಗೆ 500 ರೂಪಾಯಿ ನಿಗದಿ ಮಾಡಲು ಒಂದು ಕಾರಣವಿದೆ. ಅದು ಆರ್ಥಿಕ ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ಸಹಾಯ ಮಾಡುವ ಉದ್ದೇಶ. ಕನ್ನಡ ಚಿತ್ರರಂಗಕ್ಕಾಗಿ ದುಡಿದ ಕೆಲವು ನಿರ್ದೇಶಕರು ಇಂದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೆಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿಯಲ್ಲಿದ್ದಾರೆ.

ಇದನ್ನು ಮನಗಂಡ ಚಿತ್ರತಂಡ ಟೀಸರ್‌ ಬಿಡುಗಡೆಗೆ ದರ ನಿಗದಿ ಮಾಡಿದೆ. ಇದರಿಂದ ಬಂದ ಹಣವನ್ನು ಆಯ್ದ ನಿರ್ದೇಶಕರಿಗೆ ಅಂದೇ ನೀಡುವ ಉದ್ದೇಶವಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಅಂದು ಸಂಗ್ರಹವಾದ ಹಣವನ್ನು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನೀಡಲಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.



ಇನ್ನು, ವಿದೇಶದಲ್ಲಿ ಸುದೀಪ್‌ "ಕೋಟಿಗೊಬ್ಬ-3' ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಎಲ್ಲಾ ಓಕೆ, ಪ್ರೇಮ್‌ ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತಾರೆಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಪ್ರೇಮ್‌ ಹೇಳುವಂತೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಭರದಿಂದ ಸಿನಿಮಾ ಕೆಲಸ ಸಾಗುತ್ತಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಕೂಡಾ ನಡೆಯಲಿದೆ. ಚಿತ್ರವನ್ನು ಸಿ.ಆರ್‌.ಮನೋಹರ್‌ ನಿರ್ಮಿಸುತ್ತಿದ್ದಾರೆ. 

You May Also Like

0 comments