ಮೊದಲನೇ ದಿನ ದೊಡ್ಮನೆ ಹುಡ್ಗ ನೋಡಲು ಹೋಗೋರಿಗೆ ಕಾದಿದೆ 2 ಸರ್ ಪ್ರೈಸ್

by - September 22, 2016


ಪುನೀತ್ ರಾಜ್  ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇನ್ನು ಈ ಚಿತ್ರ ನೋಡೋಕೆ ಹೋಗೋರಿಗೆ ಚಿತ್ರಮಂದಿರದಲ್ಲಿ 2 ಸರ್ ಪ್ರೈಸ್ ಕಾದಿರುತ್ತೆ. ಹೌದು 'ದೊಡ್ಮನೆ ಹುಡ್ಗ' ನೋಡಲು ಹೋಗುವ ಸಿನಿ ಪ್ರಿಯರಿಗೆ 'ರಾಜಕುಮಾರ' ಮತ್ತು 'ಶ್ರೀಕಂಠ'ನ ದರ್ಶನ ಕೂಡ ಆಗಲಿದೆ. ಡಬಲ್ ಧಮಾಕ ಆಫರ್ ಎನ್ನುವಂತೆ 'ದೊಡ್ಮನೆ ಹುಡ್ಗ' ಚಿತ್ರದ ಪ್ರದರ್ಶನ ಸಂದರ್ಭದಲ್ಲಿ 'ರಾಜಕುಮಾರ' ಮತ್ತು 'ಶ್ರೀಕಂಠ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಲಿದೆ.



ಪುನೀತ್‌ ಅಭಿನಯದ "ರಾಜಕುಮಾರ' ಚಿತ್ರದ ಚಿತ್ರೀಕರಣ ಈಗಾಗಲೇ ಶೇ 70ರಷ್ಟು ಮುಗಿದಿದೆಯಂತೆ. ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾದ ಚಿತ್ರದ ಚಿತ್ರೀಕರಣ, ನಂತರದ ದಿನಗಳಲ್ಲಿ ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ನಡೆದಿದೆ. ಇನ್ನು ಮುಂದಿನ ದಿನಗಳಲ್ಲಿ ಗೋವಾ, ಮಲೇಷ್ಯಾ ಮತ್ತು ಕಾಶಿಯಲ್ಲಿ ಚಿತ್ರೀಕರಣ ಬಾಕಿ ಇದೆಯಂತೆ. ಇನ್ನು ಒಂದು ಫೈಟು, ಒಂದು ಹಾಡು ಮತ್ತು 15 ದಿನಗಳ ಮಾತಿನ ಭಾಗದ ಚಿತ್ರೀಕರಣ ಮುಗಿದರೆ, ಚಿತ್ರಕ್ಕೆ ಕುಂಬಳಕಾಯಿ ಒಡೆದಂತೆ. ಡಾ||ಶಿವಣ್ಣನವರ 'ಶ್ರೀಕಂಠ' ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಧ್ವನಿಸುರಳಿ ಬಿಡುಗಡಯಾಗಲಿದೆ. 

You May Also Like

0 comments