ಕಫ್ತಾ ಅವಾರ್ಡ್ಸ್ 2017 ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಡಾನ್ಸ್ ಮಾಡಲು ತಿರಸ್ಕರಿಸಿದ್ದೇಕೆ ??

by - September 23, 2017




ಒಂದು ಸಿನಿಮಾ ಉತ್ತಮವಾಗಿ ಮೂಡಿಬರಲು ನಟ, ನಟಿ ನಿರ್ದೇಶಕರಂತೆಯೇ ಆ ಸಿನಿಮಾಗಾಗಿ ಕೆಲಸ ಮಾಡಿದ ತಂತ್ರಜ್ಞರೂ ಮುಖ್ಯವಾಗುತ್ತಾರೆ. ಚಿತ್ರ ನಿರ್ದೇಶಕನಿಗೆ ಮಾತ್ರ ತಂತ್ರಜ್ಞರು ಎಷ್ಟು ಮುಖ್ಯ ಎನ್ನುವುದು ಗೊತ್ತಿರುತ್ತದೆ. ಹೊರಜಗತ್ತಿನ ಕಣ್ಣಿಗೆ ಅವರು ಬೀಳುವುದಿಲ್ಲ. ಇಲ್ಲಿಯವರೆಗೆ ಅವರ ಕೆಲಸವನ್ನು ಗುರುತಿಸಿರುವುದು ಅಪರೂಪ ಎನ್ನಬಹುದು. ತೆರೆ ಹಿಂದೆ ಅವರ ಶ್ರಮ, ಪ್ರತಿಭೆ ಜನರಿಗೆ ತಿಳಿಯಬೇಕು, ಅವರನ್ನೂ ಜನರು ಗುರುತಿಸುವಂತಾಗಬೇಕು ಎಂಬ ಉದ್ದೇಶದಿಂದ ಟೈಮ್ಸ್‌ ಆಫ್‌ ಇಂಡಿಯಾ ಪ್ರತಿಭಾವಂತ ತಂತ್ರಜ್ಞರಿಗಾಗಿ ವೇದಿಕೆಯನ್ನು ಸೃಷ್ಟಿಸಿದೆ.

ಎರಡನೇ ವರ್ಷದ ಟೈಮ್ಸ್‌ ಕನ್ನಡ ಫಿಲ್ಮ್‌ ಟೆಕ್ನಿಕಲ್‌ ಅವಾರ್ಡ್ಸ್ (ಟೈಮ್ಸ್‌ ಕಫ್ತಾ) ಸಮಾರಂಭ ಶಂಕರ್‌ ಪ್ರೊಡಕ್ಷನ್ಸ್‌ ಸಹಯೋಗದೊಂದಿಗೆ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿತು. ಈ ವಿಶೇಷ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ನಟ ಯಶ್‌ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ನಿರ್ದೇಶಕರು ಮತ್ತು ನಟರ ಶ್ರಮದಿಂದ ಮಾತ್ರ ಒಂದು ಸಿನಿಮಾ ತೆರೆಗೆ ಬರಲು ಸಾಧ್ಯವಿಲ್ಲ. ತೆರೆಯ ಹಿಂದೆ ಹಲ ತಂತ್ರಜ್ಞರ ಶ್ರಮ ಇರುತ್ತದೆ. ಜನಪ್ರಿಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ತಂತ್ರಜ್ಞರನ್ನು ಗುರುತಿಸಲು ಕೆಲವೇ ಕೆಲವು ವಿಭಾಗಗಳಿವೆ. ಹೀಗಿರುವಾಗ ಟೈಮ್ಸ್‌ ಆಫ್‌ ಇಂಡಿಯಾ 2016ರ ಸ್ಯಾಂಡಲ್‌ವುಡ್‌ ತಂತ್ರಜ್ಞರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲು ನಿರ್ಧರಿಸಿದಾಗ ನಾವೂ ಕೂಡಾ ಕೈಜೋಡಿಸಲು ಇದು ಅತ್ಯುತ್ತಮ ವೇದಿಕೆ ಎಂದು ನಮಗನ್ನಿಸಿತು. ಕಫ್ತಾದ ಜೊತೆ ಎರಡನೇ ಬಾರಿ ನಾವು ಕೈಜೋಡಿಸುತ್ತಿದ್ದೇವೆ. ಇದು ವರ್ಷದಿಂದ ವರ್ಷಕ್ಕೆ ದೊಡ್ಡದಾಗಿ, ಅತ್ಯುತ್ತಮವಾಗಿ ಬೆಳೆಯಲಿ, ಮತ್ತು ಇತರ ಚಿತ್ರರಂಗಗಳಿಗೆ ಮಾದರಿಯಾಗಲಿ ಎಂದು ನಾವು ಆಶಿಸುತ್ತೇವೆ' ಎಂದು ಹೊಂಬಾಳೆ ಫಿಲ್ಮ್ಸ್ ಪರವಾಗಿ ಹೇಳಿದ್ದಾರೆ ವಿಜಯ್‌ ಕಿರಗಂದೂರ್‌.

ಈ ವೇಳೆ ಯಶ್ ಅವರನ್ನ ವೇದಿಕೆ ಮೇಲೆ ಕರೆದ ನಿರೂಪಕ ಪಬ್ಲಿಕ್ ಡಿಮ್ಯಾಂಡ್ ಮೇಲೆ ಮಾಸ್ಟರ್ ಪೀಸ್ ಹಾಡಿಗೆ ಡಾನ್ಸ್ ಮಾಡಬೇಕೆಂದು ಕೇಳಿಕೊಂಡರು. ಡಾನ್ಸ್ ಮಾಡಲು ಯಶ್ ರವರು ತಿರಸ್ಕರಿಸಿದರು. ಇದಕ್ಕೊಂದು ಕಾರಣಾ ಕೊಟ್ಟರು ರಾಕಿಂಗ್ ಸ್ಟಾರ್ ಯಶ್. ಅದೇನಂತೀರಾ..ನೀವೇ ನೋಡಿ.. :


ಫುಲ್ ಸ್ಕ್ರೀನ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ 

" ಈ ಪ್ರಶಸ್ತಿಯ ಪರಿಕಲ್ಪನೆ ಪ್ರಾರಂಭವಾದಾಗಿನಿಂದ ನಾನು ಇದರ ಜತೆ ಇದ್ದೇನೆ. ತಂತ್ರಜ್ಞರ ತಂಡ ಇಲ್ಲದಿದ್ದರೆ ಒಂದು ಸಿನಿಮಾ ಪೂರ್ಣಗೊಳ್ಳುವುದು ಸಾಧ್ಯವೇ ಇಲ್ಲ. ಇಂಥ ತಂತ್ರಜ್ಞರನ್ನು ಗುರುತಿಸಿ ಸನ್ಮಾನಿಸಲು ಇದು ಅತ್ಯುತ್ತಮ ವೇದಿಕೆ ಎಂದು ನಂಬಿದ್ದೇನೆ. ಸಾಮಾನ್ಯವಾಗಿ ಚಲನಚಿತ್ರ ಪ್ರಶಸ್ತಿ ಸಮಾರಂಭಗಳು ದೊಡ್ಡ ದೊಡ್ಡ ಸ್ಟಾರ್‌ಗಳಿಂದ ಜಗಮಗಿಸುತ್ತದಲ್ಲದೆ, ಟಿವಿಯಲ್ಲಿ ಪ್ರಸಾರ ಮಾಡುತ್ತಾರೆ ಕೂಡಾ. ಟೈಮ್ಸ್‌ ಕಫ್ತಾ ಸಮಾರಂಭವನ್ನು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವುದು ಒಳ್ಳೆಯ ಕೆಲಸ. ಅತ್ಯುತ್ತಮ ಉದ್ದೇಶಕ್ಕಾಗಿ ನಡೆಯಲಿರುವ ಈ ಕಾರ್ಯಕ್ರಮದ ಭಾಗವಾಗೋಕೆ ನನಗೆ ತುಂಬಾ ಖುಷಿಯಾಗ್ತಿದೆ".

You May Also Like

0 comments