ಕುರುಕ್ಷೇತ್ರ ದ ಎಕ್ಸ್ ಕ್ಲ್ಯೂಸಿವ್ ಮೇಕಿಂಗ್ | ಚಾಲೆಂಜಿಂಗ್ ಸ್ಟಾರ್ ದರ್ಶನ್ | Kurukshetra Exclusive Making | Challenging Star Darshan |

by - December 30, 2017


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ 'ಕುರುಕ್ಷೇತ್ರ' ಈಗಾಗಲೇ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಶುರು ಮಾಡಿದೆ.ಸತತ ನೂರು ದಿನಗಳ ಕಾಲ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಹಾಡಿನ ಮೇಕಿಂಗ್  ಬಹಿರಂಗವಾಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಸೆಟ್‌ನಲ್ಲಿ ಇಂದು ದುರ್ಯೋಧನ ತೆರೆ ಮೇಲೆ ಬರುವ ದೃಶ್ಯದ ಚಿತ್ರೀಕರಣ ನಡೆಯಲಿದ್ದು, ಆನೆ ಮೇಲೆ ದರ್ಶನ್ ಬರಲಿದ್ದಾರೆ. ಸೆಟ್‌ಗೆ ಪತ್ರಕರ್ತರನ್ನು ಕರೆಯಿಸಿಕೊಂಡಿದ್ದು, ಮುನಿರತ್ನ ಸಹ ಸೆಟ್‌ನಲ್ಲಿದ್ದಾರೆ. ಇದಕ್ಕೂ ಮುನ್ನ ಮುನಿರತ್ನ ಅವರೇ ಆನೆ ಮೇಲೆ ಬಂದಿದ್ದು ವಿಶೇಷವಾಗಿತ್ತು.

ಕುರುಕ್ಷೇತ್ರ ಮೇಕಿಂಗ್ :


ದರ್ಶನ್ 'ದುರ್ಯೋಧನ', ಅಂಬರೀಷ್ 'ಭೀಷ್ಮ', ರವಿಚಂದ್ರನ್ 'ಕೃಷ್ಣ', ಅರ್ಜುನ್ ಸರ್ಜಾ 'ಕರ್ಣ', ಬಹುಭಾಷಾ ನಟಿ ಸ್ನೇಹಾ 'ದ್ರೌಪದಿ', ಡ್ಯಾನಿಶ್ ಅಖ್ತರ್ ಸೈಫಿ 'ಭೀಮ', ರವಿಶಂಕರ್ 'ಶಕುನಿ', ಶ್ರೀನಾಥ್ 'ಧೃತರಾಷ್ಟ್ರ', ಶ್ರೀನಿವಾಸ ಮೂರ್ತಿ 'ದ್ರೋಣಚಾರ್ಯ', ಶಶಿಕುಮಾರ್ 'ಧರ್ಮರಾಯ', ನಿಖಿಲ್ ಕುಮಾರ್ 'ಅಭಿಮನ್ಯು', ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮುನಿರತ್ನ ನಿರ್ಮಾಣ ಮಾಡುತ್ತಿದ್ದಾರೆ.

You May Also Like

0 comments