ವಿಡಿಯೋ : ಚಂದನ್ ಶೆಟ್ಟಿಯ ಮೊದಲ ತಮಿಳ್ ರಾಪ್.!!

by - January 03, 2018



' ಮೂರೆ ಮೂರು ಪೆಗ್ ' ಎನ್ನುತ್ತಾ ಸಂಗೀತ ಪ್ರಿಯರೊಂದಿಗೆ ಬಹಳಷ್ಟು ಜನರ ಮನಗೆದ್ದಿದ್ದ ಚಂದನ್ ಶೆಟ್ಟಿ ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿರುವುದು ಎಲ್ಲರಿಗು ತಿಳಿದಿರುವಂತಹದ್ದು.
ರಾಪ್ ಸಿಂಗರ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ತಮ್ಮ ರಾಪ್ ಮ್ಯೂಸಿಕ್ ಮೂಲಕ ಸಖತ್ ಮನರಂಜನೆ ನೀಡುತ್ತಿದ್ದಾರೆ. ತಮ್ಮದೇ ಆಲ್ಬಂ ಹಾಡುಗಳು ಮತ್ತು ಕನ್ನಡ ಸಿನಿಮಾ ಹಾಡುಗಳ ಮೂಲಕ 'ಬಿಗ್ ಬಾಸ್' ವೀಕ್ಷಕರಿಗೆ ಖುಷಿ ನೀಡುತ್ತಿದ್ದಾರೆ. ಅವರು ಬಿಗ್ ಬಾಸ್ ಗೆ ಹೋಗುವ ಮುನ್ನ ಬಹಳಷ್ಟು ಚಿತ್ರಗಳಿಗೆ ರಾಪ್ ಮಾಡಿದ್ದರು. ಅವು ಈಗ ಸಾಲು-ಸಾಲಾಗಿ ರಿಲೀಸ್ ಆಗ್ತಿವೆ. ಆ ಸಾಲಿನಲ್ಲಿ ಒಂದು ತಮಿಳ್ ರಾಪ್ ಕೂಡ ಇದೆ. ಇದೇನಪ್ಪ ಚಂದನ್ ಶೆಟ್ಟಿ ತಮಿಳಿನಲ್ಲಿ ರಾಪ್ ಶುರು ಮಾಡ್ತಿದಾನಾ ಅಂದ್ಕೊಂಡ್ರಾ?. ಇಲ್ಲ.



ದಕ್ಷಿಣ ಭಾರತದ ಖ್ಯಾತ ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ ಅವರು ತಮ್ಮ ಪ್ರೀತಿಯ ಪುತ್ರಿ ನಟಿ ಐಶ್ವರ್ಯ ಸರ್ಜಾ ಅವರಿಗಾಗಿ 'ಪ್ರೇಮ ಬರಹ' ಎಂಬ ಒಂದು ಸಿನಿಮಾ ಮಾಡುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಇದೆ.ಚಿತ್ರಕ್ಕೆ ನಾಯಕನಾಗಿ ಚಂದನ್‌ ನಟಿಸಿದ್ದಾರೆ. ಚಂದನ್‌ ಮತ್ತು ಐಶ್ವರ್ಯ ಜೊತೆಗೆ ಸಾಧು ಕೋಕಿಲ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಆ ಚಿತ್ರದ ಚಿತ್ರೀಕರಣ ಮುಗಿದಿದ್ದು ಸದ್ಯದಲ್ಲೇ ರಿಲೀಸ್ ಗೆ ಸಜ್ಜಾಗಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಜೆಸ್ಟಿ ಗಿಫ್ಟ್ ಅವರ ಸಂಗೀತ ಮತ್ತು ವೇಣು ಅವರ ಛಾಯಾಗ್ರಹಣವಿದೆ. ಈ ಚಿತ್ರದ ಒಂದು ಹಾಡಿಗೆ ಚಂದನ್ ಶೆಟ್ಟಿ ಯವರು ರಾಪ್ ಮಾಡಿದ್ದಾರೆ  ಈ ಚಿತ್ರವೂ ತಮಿಳಿನಲ್ಲೂ ನಿರ್ಮಾಣಗೊಂಡಿರುವ ಕಾರಣ ಚಂದನ್ ಶೆಟ್ಟಿ ಯವರು ಕನ್ನಡದ ಜೊತೆಗೆ ತಮಿಳಿನಲ್ಲಿ ಕೂಡ ರಾಪ್ ಮಾಡಿದ್ದಾರೆ. ಚಂದನ್ ಶೆಟ್ಟಿ ರಾಪ್ ಮಾಡಿರುವ ಆ ಚಿತ್ರದ ತಮಿಳ್ ಪ್ರೊಮೊ ರಿಲೀಸ್ ಆಗಿದೆ. ಆ ಪ್ರೊಮೊ ಕೆಳಗೆ ನೋಡಬಹುದು.


You May Also Like

1 comments

  1. How do I make money off of betting on soccer?
    How do I make money off of betting on soccer? งานออนไลน์ It is an incredibly complicated process, and as such, it requires 바카라 사이트 a minimum deccasino bet of 10 (1/2)

    ReplyDelete